ಅಂಜು ಜೈನ್ (ಜನನ ೧೧ ಆಗಸ್ಟ್ ೧೯೭೪) ಭಾರತದ ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ಕ್ರಿಕೆಟ್ ತರಬೇತುದಾರರಾಗಿದ್ದಾರೆ. ಅವರು ವಿಕೆಟ್ ಕೀಪರ್ ಮತ್ತು ಬಲಗೈ ಬ್ಯಾಟ್ಸ್ಮನ್ ಆಗಿ ಆಡಿದರು. ೧೯೯೩ ಮತ್ತು ೨೦೦೫ ರ ನಡುವೆ ಅವರು ಭಾರತಕ್ಕಾಗಿ ಎಂಟು ಟೆಸ್ಟ್ ಪಂದ್ಯಗಳು ಮತ್ತು ೬೫ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡರು. ಅವರು ದೆಹಲಿ ಮತ್ತು ಏರ್ ಇಂಡಿಯಾಕ್ಕಾಗಿ ದೇಶೀಯ ಕ್ರಿಕೆಟ್ ಆಡಿದ್ದಾರೆ. ಅವರು ಈ ಹಿಂದೆ ಭಾರತ ಮತ್ತು ಬಾಂಗ್ಲಾದೇಶದ ತರಬೇತುದಾರರಾಗಿದ್ದರು ಮತ್ತು ಪ್ರಸ್ತುತ ಭಾರತೀಯ ದೇಶೀಯ ಸರ್ಕ್ಯೂಟ್‍ನಲ್ಲಿ ತರಬೇತುದಾರರಾಗಿದ್ದಾರೆ. == ವೈಯಕ್ತಿಕ ಮಾಹಿತಿ == ಅಂಜು ಜೈನ್ ೧೧ ಆಗಸ್ಟ್ ೧೯೭೪ ರಂದು ದೆಹಲಿಯಲ್ಲಿ ಜನಿಸಿದರು. ಇವರು ೧೯೮೬ ರಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಅವರು ೧೯೯೫ ಮತ್ತು ೨೦೦೩ ರ ನಡುವೆ ೮ ಮಹಿಳಾ ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. ಮತ್ತು ೬೫ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. ಅವರು ವಿಕೆಟ್ ಕೀಪರ್ ಆಗಿದ್ದರು. ಅವರು ೮ ಏಕದಿನ ಪಂದ್ಯಗಳಲ್ಲಿ ಭಾರತೀಯ ತಂಡದ ನಾಯಕತ್ವ ವಹಿಸಿದ್ದರು. ೨೦೦೦ ದ ಕ್ರಿಕ್ಇನ್ಫೊ ಮಹಿಳಾ ಕ್ರಿಕೆಟ್ ವಿಶ್ವಕಪ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುವ ಮೊದಲು ಸೆಮಿ-ಫೈನಲ್‍ಗೆ ಭಾರತವನ್ನು ಮುನ್ನಡೆಸಿದರು. == ವೃತ್ತಿಜೀವನ == ಅವರು ೨೦೦೦ ದ ವಿಶ್ವಕಪ್‍ನಲ್ಲಿ ಭಾರತವನ್ನು ಮುನ್ನಡೆಸಿದರು, ಅಲ್ಲಿ ತಂಡವು ನ್ಯೂಜಿಲೆಂಡ್ ವಿರುದ್ಧ ಸೋಲುವ ಮೊದಲು ಸೆಮಿಫೈನಲ್ ತಲುಪಿತು. ಡಬ್ಲ್ಯುಒಡಿಐಗಳಲ್ಲಿ ಅತಿ ಹೆಚ್ಚು ಅಂದರೆ ೫೧ ಸ್ಟಂಪಿಂಗ್ ಮಾಡಿದ ದಾಖಲೆಯನ್ನು ಅವರು ಜಂಟಿಯಾಗಿ ಹೊಂದಿದ್ದಾರೆ. ಜೈನ್ ನಾಯಕರಾಗಿ, ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್‌ಮ್ಯಾನ್ ಆಗಿ ೮ ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಇದು ದಾಖಲೆಯಾಗಿದೆ. ಅಂಜು ೨೦೦೫ ರಲ್ಲಿ ಅಂದಿನ ರಾಷ್ಟ್ರಪತಿ ಡಾ ಎ.ಪಿ.ಜೆ ಅಬ್ದುಲ್ ಕಲಾಂ ಅವರಿಂದ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. == ತರಬೇತಿ ಜೀವನ == ಆಂಧ್ರಪ್ರದೇಶದ ಯುವಕರ ಮತ್ತು ಮಹಿಳಾ ಕ್ರಿಕೆಟ್ ಆಟಗಾರರ ಅಭಿವೃದ್ಧಿಗೆ ಅವರು ತರಬೇತುದಾರರಾಗಿದ್ದಾರೆ. ಅವರು ಒಡಿಶಾ, ತ್ರಿಪುರಾ ಮತ್ತು ಅಸ್ಸಾಂ ಮತ್ತು ಭಾರತೀಯ ತಂಡಕ್ಕೆ ತರಬೇತುದಾರರಾಗಿದ್ದಾರೆ. ಪ್ರಸ್ತುತ, ಅವರು ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿದ್ದಾರೆ. ಟಿ-೨೦ ಸಮಯದಲ್ಲಿ ದೇವಿಕಾ ಪಾಲ್ಶಿಕರ್ (ಸಹಾಯಕ ತರಬೇತುದಾರ) ಮತ್ತು ಅನುಜಾ ಡಾಲ್ವಿ (ಭೌತಚಿಕಿತ್ಸಕ) ಎಂಬ ಇಬ್ಬರು ಭಾರತೀಯರು ಅಂಜು ಅವರಿಗೆ ಸಹಾಯ ಮಾಡಿದರು. ಕಳೆದ ಋತುವಿನಲ್ಲಿ ವಿದರ್ಭ ಮಹಿಳಾ ತಂಡದ ಮುಖ್ಯ ತರಬೇತುದಾರರಾಗಿದ್ದರು ಮತ್ತು ೨೦೧೨ ರ ಮಹಿಳಾ ವಿಶ್ವ ಟಿ-೨೦ ಮತ್ತು ೨೦೧೩ ರ ವಿಶ್ವಕಪ್‍ನಲ್ಲಿ ಸಹ ಭಾರತ ತಂಡಕ್ಕೆ ತರಬೇತಿ ನೀಡಿದ್ದಾರೆ. ಇವರು ಬಾಂಗ್ಲಾದೇಶದ ಉದ್ಯೋಗವನ್ನು ನೆರವೇರಿಸುವ ಭಾರತದ ಎರಡನೇ ಮಹಿಳಾ ಕ್ರಿಕೆಟಿಗರಾಗಿದ್ದಾರೆ. == ಉಲ್ಲೇಖಗಳು ==